ಬಿಗ್ ಬಾಸ್ ಕನ್ನಡ ಸೀಸನ್ 13 (Bigg Boss Kannada season 13) ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಸೆಪ್ಟೆಂಬರ್ 6ರಂದು ಶೋ ಗ್ರ್ಯಾಂಡ್ ಓಪನಿಂಗ್ ಕಾಣಲಿದ್ದು, ಕಿಚ್ಚ ಸುದೀಪ್ (Kiccha Sudeep) ಮತ್ತೊಮ್ಮೆ ನಿರೂಪಕರಾಗಿ ಮರಳುತ್ತಿದ್ದಾರೆ. ಈ ಬಾರಿ ಹೊಸ ರೀತಿಯ ಪ್ರೋಮೋಗಳು, ವಿಭಿನ್ನ ಆಯ್ಕೆ ಪ್ರಕ್ರಿಯೆ ಮತ್ತು ಹೊಸ ಪ್ರಯೋಗಗಳ ಮೂಲಕ ಸೀಸನ್ 13 ಕುತೂಹಲ ಮೂಡಿಸಿದೆ. ಈ ನಡುವೆ ಇಂದು ನಡೆಯುತ್ತಿರುವ ಸುದ್ದಿಗೋಷ್ಠಿಯಲ್ಲಿ ಸುದೀಪ್ ಬಳಿ ದರ್ಶನ್ (Darshan) ಹಾಡುಗಳ ಬಗ್ಗೆ ಕೇಳಲಾದ ಪ್ರಶ್ನೆ ಹಾಗೂ ಅದಕ್ಕೆ ಕಿಚ್ಚ ನೀಡಿದ ಉತ್ತರ ಭಾರೀ ಚರ್ಚೆಗೆ ಕಾರಣವಾಗಿದೆ.

ದರ್ಶನ್ ಸಾಂಗ್ಸ್ ಯಾಕೆ ಹಾಕಲ್ಲ?

ಬಿಗ್ ಬಾಸ್ ಕನ್ನಡ ಸೀಸನ್ 13ರ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಬಳಿ ದರ್ಶನ್ ಹಾಡುಗಳನ್ನು ಬಿಗ್ ಬಾಸ್ ಮನೆಯಲ್ಲಿ ಯಾಕೆ ಪ್ಲೇ ಮಾಡುವುದಿಲ್ಲ ಎಂಬ ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆಗೆ ಸುದೀಪ್ ನೀಡಿದ ಉತ್ತರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ದರ್ಶನ್ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಸುದೀಪ್, ಓಪನ್ ಆಗಿ ಹೇಳ್ತೀನಿ ಎಂದು ಮಾತು ಆರಂಭಿಸಿ, ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರ ಮೇಲೂ ಪ್ರೀತಿ ಇದೆ. ಯಾರ ಮೇಲೂ ದ್ವೇಷವಿಲ್ಲ ಹಾಗೆಯೇ  ಯಾರನ್ನೂ ತುಳಿಯುವ ಉದ್ದೇಶ ತಮ್ಮಿಂದ ಆಗುವುದಿಲ್ಲ. ಯಾರನ್ನ ತುಳಿಯೋದಕ್ಕೆ ಯಾವ ನನ್ನ ಮಗನಿಂದನು ಆಗಲ್ಲ ಎಂದು ಉತ್ತರಿಸಿದ್ದಾರೆ.