ವಾರ ಪೂರ್ತಿ ಟಾಸ್ಕ್ ನೆಪದಲ್ಲಿ ಸ್ಪರ್ಧಿಗಳು ಮಾಡಿದ ಅತಿರೇಕದ ವರ್ತನೆಗೆ ಹಿಂದೆಂದೂ ಕಾಣದ ರೀತಿಯಲ್ಲಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಳಪೆ ಕೊಟ್ಟ ಬಳಿಕ ಗಗನ್ ಹಾಗೂ ಗಾನವಿ ನಡುವೆ ಜಗಳವಾಗಿತ್ತು. ಗಗನ್ ಆಡಿದ ಒಂದು ಮಾತಿನಿಂದ ಗಾನವಿ ಅಸಹ್ಯಕರ ಮಾತನ್ನು ಬಳಸಿದ್ದರು. ಇದರ ಬಗ್ಗೆ ಮಾತನಾಡುತ್ತಾ ಸುದೀಪ್ ಭಾವುಕರಾಗಿದ್ದಾರೆ.
ನಿಮ್ಮ ನಡುವೆ ಮನಸ್ತಾಪ ಇದ್ದರೆ, ಜಗಳವಾಗುತ್ತಿದ್ದರೆ ನಿಮ್ಮ ಬಗ್ಗೆ ನೀವು ಏನಾದರೂ ಮಾತಾಡಿಕೊಳ್ಳಿ. ಆದರೆ ನಿಮ್ಮ ಕುಟುಂಬದವರ ಬಗ್ಗೆ ಇಲ್ಲಿ ಮಾತಾಡಬೇಡಿ. ಇದು ವ್ಯಕ್ತಿತ್ವದ ಆಟ ಎನ್ನುವ ನಿಮ್ಮನ್ನು ಕೋಟ್ಯಂತರ ಜನ ನೋಡುತ್ತಿರುವಾಗ ಹೀಗೆಲ್ಲ ಮಾತಾಡಿದರೆ ಆಗ ನಿಮ್ಮ ವ್ಯಕ್ತಿತ್ವದ ಬೆಲೆ ಏನು? ಎಂದು ಕಿಡಿಕಾರಿದ್ದಾರೆ.
ಗಗನ್ ಅವರ ಬಗ್ಗೆ ನೂರು ಮಾತಾಡಿ, ಅವರ ಬಗ್ಗೆ ಏನೂ ಬೇಕಾದರೂ ಹೇಳಿ. ಅವರ ಮಾತಿನ ವಿರುದ್ಧ ನಿಲ್ಲಿ. ಆದರೆ ಇದೆಲ್ಲವನ್ನು ಬಿಟ್ಟು ಅವರ ಮನೆಯ ವಿರುದ್ಧ ಹೋಗೋದ್ಯಾಕೆ? ಎಂದು ಹೇಳುತ್ತಲೇ ಕಣ್ಣೀರಿಟ್ಟಿದ್ದಾರೆ.
Comments (0)