ಗೃಹಲಕ್ಷ್ಮಿ ಮರುಪರಿಶೀಲನೆಗೂ ಡೆಡ್​ಲೈನ್

​ಮನೆ ಮನೆಗೆ ಹೋಗಿ ಗೃಹಲಕ್ಷ್ಮಿ ಫಲಾನುಭವಿಗಳ ಪರಿಶೀಲನೆ ಕಾರ್ಯ ಶುರುವಾಗ್ತಿದ್ದು, ಯೋಜನೆಗೆ ಫಲಾನುಭವಿಗಳಾಗಲು ಮಹಿಳೆಯರು ಸೂಕ್ತ ದಾಖಲೆಗಳನ್ನ ನೀಡಬೇಕಿದೆ. ಮನೆಗೆ ಬಂದಾಗ ಮನೆಯಲ್ಲಿದ್ದವರು ಸರಿಯಾದ ಮಾಹಿತಿ ನೀಡಿದ್ರೆ ಮಾತ್ರ ಅಂಥವರಿಗೆ ಸೌಲಭ್ಯ ಮುಂದುವರಿಯಲಿದೆ. ಮರುಪರಿಶೀಲನೆಗೆ ಕೇವಲ ಒಂದು ತಿಂಗಳ ಡೆಡ್​ಲೈನ್ ಇರಲಿದೆ.

ವೋಟರ್ ಐಡಿ ಇಲ್ಲದವರಿಗೆ 2000 ಕಟ್​!

ವೋಟರ್ ಐಡಿ ಇಲ್ಲದಿದ್ದರೆ ಗೃಹಲಕ್ಷ್ಮಿ ಯೋಜನೆಯಿಂದಲೂ ಫಲಾನುಭವಿ ಹೆಸರು ಡಿಲೀಟ್ ಆಗಲಿದೆ. ಇತ್ತೀಚಿಗೆ ನಡೆದ SIR ಪ್ರಕ್ರಿಯೆನಲ್ಲಿ ಹೆಸರು ಡಿಲೀಟ್ ಆಗಿದ್ರೆ. ಅಂಥಹ ಮಹಿಳೆಯರನ್ನ ಗೃಹಲಕ್ಷ್ಮಿ ಯೋಜನೆಯಿಂದಲೂ ತೆಗೆದು ಹಾಕಲಾಗುತ್ತೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ..