33ನೇ ಕಂತಿನ ಹಣ ಜಮಾವಣೆ
ಗೃಹಲಕ್ಷ್ಮಿ ಯೋಜನೆಯ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಲು ಸರ್ಕಾರ ಮನೆ-ಮನೆ ಸರ್ವೆ ನಡೆಸಿ ಪರಿಷ್ಕರಣೆ ಮಾಡಲು ಮುಂದಾಗಿದೆ. ಪರಿಷ್ಕರಣೆ ನಡೆಯುವ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡದಿರಲು ಈ ಹಿಂದೆ ಇಲಾಖೆ ನಿರ್ಧರಿಸಿತ್ತು. ಆದ್ರೆ, ಇದೀಗ 33ನೇ ಕಂತಿನ ಹಣವನ್ನು ಇದೇ ತಿಂಗಳಲ್ಲಿ ಬಿಡುಗಡೆ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
ಗೃಹಲಕ್ಷ್ಮಿಯರಿಗೆ ಮಿಸ್ ಆಗಲ್ಲ ಹಣ
ಗ್ಯಾರಂಟಿ ಪ್ರಾಧಿಕಾರದ ಸದಸ್ಯರ ಜೊತೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಈ ಕುರಿತು ಸೂಚನೆ ನೀಡಿದ್ದಾರೆ. ಪರಿಷ್ಕರಣೆ ಸಂದರ್ಭದಲ್ಲಿ ಕೂಡ ಮಹಿಳೆಯರಿಗೆ ಹಣ ಜಮೆ ಆಗಲಿದ್ದು, ಗೃಹಲಕ್ಷ್ಮಿಯರಿಗೆ ಮಿಸ್ ಆಗಲ್ಲ ಈ ತಿಂಗಳ ಹಣ. ಗೃಹಲಕ್ಷ್ಮೀ ಹಣ ಜಮೆಗೆ ಯಾವುದೇ ನಿರ್ಬಂಧ ಇಲ್ಲ. ಸರ್ವೇ ಕಾರ್ಯದ ಮೂಲಕ ಫಲಾನುಭವಿ ಹುಡುಕುವ ಪ್ರಯತ್ನ ಮಾಡಲಾಗ್ತಿದ್ದು, ಮನೆ ಬಳಿ ಗಣತಿದಾರರು ಬಂದಾಗ ಅರ್ಜಿ ಭರ್ತಿ ಮಾಡೋದು ಕಡ್ಡಾಯವಾಗಿದೆ.
ಮನೆಯಲ್ಲಿ ಇಲ್ಲದವರ ಹೆಸರು ಡಿಲೀಟ್ ಆಗುತ್ತಾ?
ಅನರ್ಹರನ್ನು ಗೃಹಲಕ್ಷ್ಮಿ ಯೋಜನೆಯಿಂದ ತೆಗೆದುಹಾಕಲು ಸರ್ಕಾರ ಈ ಮರುಪರಿಶೀಲನೆ ನಡೆಸಿದೆ. ಗೃಹಲಕ್ಷ್ಮಿ ಸಮೀಕ್ಷೆಯಲ್ಲಿ ಭಾಗಿ ಆದ್ರೆ ಮಾತ್ರ ಅರ್ಹ ಫಲಾನುಭವಿಗಳಿಗೆ ಹಣ ಸಿಗಲಿದೆ. ಮನೆ ಮನೆಗೆ ಗಣತಿದಾರರು ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸಿ ಬಳಿಕ ಅರ್ಜಿ ಭರ್ಜಿ ಮಾಡಲಿದ್ದಾರೆ. ಗಣತಿದಾರರು ಬಂದಾಗ ಮನೆಯಲ್ಲಿ ಯಾರು ಇಲ್ಲವಾದ್ರೆ ಹಣ ಕಟ್ ಹಾಗೂ ಹೆಸರು ಡಿಲೀಟ್ ಆಗುತ್ತೆ ಅನ್ನೋ ಟೆನ್ಶನ್ ಬೇಡ. ಇದಕ್ಕೂ ಒಂದು ಮಾರ್ಗ ಇದೆ.
ಮೂರು ಕಡೆ ಅರ್ಜಿ ಸಲ್ಲಿಸಬಹುದು
ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಮಹಿಳೆಯರು ಬಾಗಿಲು ಹಾಕಿಕೊಂಡು ಕೆಲಸಗಳಿಗೆ ಹೋಗ್ತಾರೆ. ಗಣತಿದಾರರು ಯಾವ ಟೈಮ್ ಅಲ್ಲಿ ಬರ್ತಾರೋ ಅನ್ನೋ ಆತಂಕ ಪಡಬೇಕಿಲ್ಲ. ಮನೆಯಲ್ಲಿ ಇದ್ದು ಮಾಹಿತಿ ನೀಡಲು ಸಾಧ್ಯವಾಗದ ಮಹಿಳೆಯರು ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಪಡಿತರ ಕೇಂದ್ರದಲ್ಲಿ ಅರ್ಜಿ ನಮೂನೆ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ಈ ಕೇಂದ್ರಗಳಲ್ಲಿ ಫೇಸ್ ಅಥೋಂಟಿಫಿಕೇಶನ್, ಬಯೋಮೆಟ್ರಿಕ್ ಕಡ್ಡಾಯವವಾಗಿದೆ. ಮರಣ ಹೊಂದಿದ್ದು ಅವರ ಹೆಸರಲ್ಲಿ ಹಣ ಪಡೆಯುತ್ತಿದ್ರೆ ಹಣ ಕಟ್ ಆಗಲಿದೆ. ಶಾಶ್ವತವಾಗಿ ವಲಸೆ ಹೋಗಿದ್ರೆ ಅವ್ರ ಹಣ ಕೂಡ ಕಟ್ ಆಗಲಿದೆ. ಈಗಾಗಲೇ ಒಂದು ಕೋಟಿ 7 ಲಕ್ಷದ 96 ಸಾವಿರದ 339 ಮಂದಿ ASDDO ಅಂತ SIR ಅಲ್ಲಿ ಗುರುತು ಮಾಡಲಾಗಿದೆ. ಇದೀಗ ಲಕ್ಷಗಟ್ಟಲೆ ಜನರಿಗೆ ಗೃಹಲಕ್ಷ್ಮೀ ಹಣ ಕಳೆದು ಕೊಳ್ಳುವ ಭೀತಿ ಶುರುವಾಗಿದೆ.
ಫಲಾನುಭವಿಗಳು ಯಾವೆಲ್ಲಾ ದಾಖಲೆ ನೀಡಬೇಕು?
*ಗಣತಿದಾರರಿಂದ ಪಡೆದ ಭರ್ತಿ ಮಾಡಿದ ಅರ್ಜಿ ನಮೂನೆ.
*ಇತ್ತೀಚಿನ ಫೋಟೋ ಮತ್ತು ಆಧಾರ್ ಪ್ರತಿ.
*ಎಪಿಎಲ್ ಅಥವಾ ಬಿಪಿಎಲ್ ರೇಷನ್ ಕಾರ್ಡ್.
*ಹಣ ಜಮೆಯಾಗುವ ಬ್ಯಾಂಕ್ ಖಾತೆ ವಿವರ.
*ಮತದಾರರ ಗುರುತಿನ ಚೀಟಿ.
*ಮೊಬೈಲ್ ನಂಬರ್.
*ಫಲಾನುಭವಿಗಳು ಮೃತಪಟ್ಟಿದ್ದರೆ, ವಲಸೆ ಹೋಗಿದ್ದರೆ, ಸ್ಥಳಾಂತರಗೊಂಡಿದ್ದರೆ ಗಣತಿದಾರರಿಗೆ ವಿವರ ನೀಡಬೇಕು.
*ವಾಸಿಸುತ್ತಿರುವ ಮನೆ ಮ್ಯಾಪಿಂಗ್, ಬಯೋಮೆಟ್ರಿಕ್ ನೀಡಬೇಕು
Comments (0)