ಹುಬ್ಬಳ್ಳಿಯ ಈಶ್ವರ ನಗರದ ವಾರ್ಡ್ ನಂಬರ್ 78ರಲ್ಲಿ ₹1.50 ಕೋಟಿ ವೆಚ್ಚದಲ್ಲಿ ನಡೆಯಲಿರುವ  "ಸೇತುವೆ ಹಾಗೂ ತೆರೆದ ಚರಂಡಿ ಕಾಮಗಾರಿ" ಭೂಮಿಪೂಜೆಗೆ ಹುಬ್ಬಳ್ಳಿ ಧಾರವಾಡ  ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಇಂದು ಚಾಲನೆ ನೀಡಿದರು.


₹1.50 ಕೋಟಿ ವೆಚ್ಚದಲ್ಲಿನಡೆಯಲಿರು ಈ  ಸೇತುವೆ ಹಾಗೂ ತೆರೆದ ಚರಂಡಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು ಇದರಿಂದ ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದು ಶಾಸಕರಾದ ಪ್ರಸಾದ್ ಅಬ್ಬಯ್ಯ  ಹೇಳಿದರು ನಂತರ  ಸ್ಥಳೀಯರೊಂದಿಗೆ ಮಾತನಾಡಿ ಸರ್ವಜನಿಕರ ಕುಶಲೋಪರಿಯನ್ನು  ಆಲಿಸಿದರು.

ಈ ಸಂದರ್ಭದಲ್ಲಿ  ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ಶಿವಗಂಗಮ್ಮ  ಮಾನ್ ಶೆಟ್ಟರ್, ಸಮಾಜ ಸೇವಕರಾದ ಸುರೇಶ್ ಮಾನ್ ಶೆಟ್ಟರ್, ಗಿರೀಶ್ ಮಾನ್ ಶೆಟ್ಟರ್ ಸೇರಿದಂತೆ ಈಶ್ವರ ನಗರದ ಮುಖಂಡರು ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು.