ಹುಬ್ಬಳ್ಳಿ : ರಾಜಸ್ಥಾನದ ಜೈಪುರ ಜಿಲ್ಲೆಯ ರಾಂಪುರ್, ಕನ್ವರ್ಪುರ ಸರ್ಕಾರಿ ಶಾಲೆಯ ಅಕ್ಕ ಪಕ್ಕದಲ್ಲಿ ಎಮ್ಮೆ, ಧನ, ಕರಗಳ ಕಟ್ಟುವುದರಿಂದ ಕೆಟ್ಟ ವಾತಾವರಣ ನಿರ್ಮಾಣವಾಗಿ ಮಕ್ಕಳ ಮೇಲೆ ದುಷ್ಟ ಪರಿಣಾಮ ಬೀರುತ್ತದೆ ಸ್ಥಿತಿಗಳನ್ನು ಪರಿಶೀಲಿಸಲು ಹೋದ ಕಾಕ್ರೋಚ್ ಜನತಾ ಪಾರ್ಟಿ (cjp) ತಂಡದ ಮುಖಂಡರಗಳ ಮೇಲೆ ಸಂಘ ಪರಿವಾರದ ಗೂಂಡಾಗಳು ದಾಳಿ ಮಾಡಿ ಕಲ್ಲುತೂರಾಟ ಹಲ್ಲೆ ವಾಹನಗಳ ದ್ವಂಸ ಅವರ ಮೊಬೈಲ್ ಗಳು ಕಸಿದು ಹೊಡೆದು ಹಾಕಿದ್ದಾರೆ ಹಾಗೂ ಮಹಿಳಾ ಕಾರ್ಯಕರ್ತರ ಮೇಲಿನ ದೌರ್ಜನ್ಯವನ್ನು ಪೊಲೀಸರ ಗಮನಕೆ ತಂದರು ಕೂಡ ಈ ರೀತಿ ಗೊರ ಘಟನೆಯಾಗಿದೆ ತಕ್ಷಣ ದಾಳಿಕೋರರನ್ನು ಬಂಧಿಸಿ ಜೈಲಿಗೆ ಕಲಿಸುವ ವ್ಯವಸ್ಥೆ ಆಗಬೇಕು ಎಂದು ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶ್ರೀ ಬಾಬಾಜಾನ್ ಮುಧೋಳ್ ಹಾಗೂ ರಾಷ್ಟ್ರೀಯ ಅಹಿಂದ ಸಂಘಟನೆಯ ಅಧ್ಯಕ್ಷರಾದ ಶ್ರೀ ಮುತ್ತಣ್ಣ ಶಿವಳ್ಳಿ ಬಲವಾಗಿ ಖಂಡಿಸಿದರು
"ಸ್ಕೂಲ್ ಟೀಕ ಕರೋ" ಅಭಿಯಾನದ ಭಾಗವಾಗಿ ಸರ್ಕಾರಿ ಶಾಲೆಯ ದುರಸ್ತಿಯನ್ನು ಪರಿಶೀಲಿಸಲು ತೆರಳಿದ್ದ ತಂಡದ ಸದಸ್ಯರ ಮೇಲೆ ಹಿಂಸಾತ್ಮಕದಾಳಿ ನಡೆಸಿದರು ಇದೊಂದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ವರದಿಗಳ ಪ್ರಕಾರ ತಂಡದ ಸದಸ್ಯರು ಗಾಯಗೊಂಡಿದ್ದು ವಾಹನಗಳ ಕಾಜುಗಳನ್ನು ಹೊಡೆದು ಪುಡಿ ಪುಡಿ ಮಾಡಲಾಗಿದೆ. ಈ ಕುರಿತು ಎಫ್ಐಆರ್ ಗಳು ದಾಖಲಾಗಿರುವುದಾಗಿ ವರದಿಯಾಗಿದೆ ಸರಕಾರಿ ಶಾಲೆಗಳ ಮೂಲಸೌಕರ್ಯದ ಕೊರತೆ ಇರುವುದರಿಂದ ಮಕ್ಕಳಿಗೆ ಸುರಕ್ಷಿತ ಕಟ್ಟಡಗಳ ಅಭಾವ ಹಾಗೂ ಸೌಚಾಲಯ, ಕುಡಿಯುವ ನೀರು,ಸ್ವಚ್ಛತೆ, ಶಿಕ್ಷಕರ ಕೊರತೆ ಶಿಕ್ಷಣದ ವ್ಯವಸ್ಥೆಯ ಸಮಸ್ಯೆಗಳನ್ನು ಪ್ರಶ್ನಿಸುವುದು ನಮ್ಮ ಹಕ್ಕುವಿದೆ ಪ್ರಜಾಪ್ರಭುತ್ವದಲ್ಲಿ ಅಪರಾಧವಲ್ಲ.
ಸಮಸ್ಯೆಗಳನ್ನು ಎತ್ತಿ ತೋರಿಸುವವರ ಮೇಲೆ ದೈಹಿಕ ದಾಳಿ ನಡೆಸುವುದು ಪ್ರಜಾಪ್ರಭುತ್ವದ ಮಾನವೀಯ ಮೌಲ್ಯಗಳಿಗೆ ವಿರೋಧವಾಗಿದೆ ಎಂದು ಮುಧೋಳ ಹೇಳಿದ್ದಾರೆ. ಸರಕಾರಿ ಶಾಲೆಗಳಿಗೆ ಹೊರಗಿನವರು ಪ್ರವೇಶ ಛಾಯಾಗ್ರಹಣ ವಿಡಿಯೋ ಗ್ರಾಫಿ ಸಂದರ್ಶನ ಮತ್ತು ಲೈವ್ ಸ್ಟ್ರೀಮಿಂಗ್ ಗೆ ಪೂರ್ವಾನುಮತಿ ಕಡ್ಡಾಯಗೊಳಿಸುವಂತೆ ರಾಜಸ್ಥಾನ್ ಶಿಕ್ಷಣ ಇಲಾಖೆಯ ಇತ್ತೀಚೆಗೆ ಮಾರ್ಗಸೂಚಿ ಹೊರಡಿಸಿರುವ ಹಿನ್ನೆಲೆಯಲ್ಲಿ ಈ ಘಟನೆ ಇನ್ನಷ್ಟು ಗಂಭೀರವಾಗಿದೆ ಶಾಲೆಗಳ ನೈಜ್ಯ ಪರಿಸ್ಥಿತಿಯನ್ನು ಸಾರ್ವಜನಿಕರು, ಮಾಧ್ಯಮಗಳು ಹಾಗೂ ಸಾಮಾಜಿಕ ಸಂಘಟನೆಗಳು ಗಮನಿಸುವುದನ್ನೇ ನಿರ್ಬಂಧಿಸುವ ಬದಲು ಸರ್ಕಾರಿ ಶಾಲೆಗಳ ಮೂಲಸೌಕರ್ಯವನ್ನು ಸುಧಾರಿಸಬೇಕು.
ಮಕ್ಕಳ ಸುರಕ್ಷತೆ ಮತ್ತು ಗೌಪ್ಯತೆ ಖಚಿತ ಪಡೆಸುವುದನ್ನು ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಹಕ್ಕು ಅಭಿವ್ಯಕ್ತಿ ಸ್ವತಂತ್ರ ಮತ್ತು ಸಾರ್ವಜನಿಕ ಹಿತಾಸಕ್ತಿಯ ಮೇಲ್ವಿಚಾರಣೆಯನ್ನು ರಕ್ಷಿಸುವುದನ್ನು ಸರ್ಕಾರದ ಆದ್ಯ ಕರ್ತವ್ಯ ಜಯಪುರದ ಘಟನೆಯ ಸತ್ಯವನ್ನು ನ್ಯಾಯಾಂಗ ತನಿಖೆಯ ಮೂಲಕ ಹೊರತಂದು ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ವಿವಿಧ ಸಂಘಟನೆಯ ಮುಖಂಡರಗಳಾದ ಶ್ರೀ ಬಾಬಾಜಾನ್ ಮುಧೋಳ್, ಮುತ್ತಣ್ಣ ಶಿವಳ್ಳಿ, ಮೌಲಾ ಸಾಬ್ ನದಾಫ್, ಯೂಸುಫ್ ಬಳ್ಳಾರಿ, ಶಮ್ ಶೀರ್ ಗಂಜೆವಾಲೆ,ರಮೇಶ್ ಭೋಸ್ಲೆ, ಕೇಶವ್ ಮೂರ್ತಿ,ವಿಜಯ್ ಕುಮಾರ್,ಕರೀಂ ಲಕ್ಕುಂಡಿ , ಪೀರ್ ಸಾಬ್ ನದಾಫ್,ಶಂಕರ ಭೋಜಗಾರ್,ಬೀರಪ್ಪ ಕಟಗಿ ಮುಂತಾದವರು ಖಂಡಿಸಿದರು.
Comments (0)