ಊಟ ಮಾಡುವಾಗ್ಲೇ ಹೋಯ್ತು ಜೀವ!
ಮಗಳು ಹಾಗೂ ಅಳಿಯನ ಜೊತೆ ಸೋಫಾ ಮೇಲೆ ಕುಳಿತು ಊಟ ಮಾಡ್ತಿದ್ದ ಮಾವ ಬಾಯಿಗೆ ತುತ್ತು ಹಾಕಿಕೊಳ್ಳುವಾಗಲೇ ಹೃದಯ ಇಡ್ಕೊಂಡು ಬಿದ್ದು ಪ್ರಾಣ ಬಿಟ್ಟಿದ್ದಾರೆ. ಮಗಳು ಹಾಗೂ ಅಳಿಯನ ಕಣ್ಣೆದುರೇ ವ್ಯಕ್ತಿ ಜೀವ ಹೋಗಿದೆ.
ಶಿವಲಿಂಗಯ್ಯ ಸಾವು
ರಾಮನಗರ ತಾಲೂಕಿನ ಮಂಚಶೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಶಿವಲಿಂಗಯ್ಯ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಊಟ ಮಾಡುವಾಗ ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ಆಗಸ್ಟ್ 22ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಗಳು, ಅಳಿಯನ ಜೊತೆ ಊಟ ಮಾಡುವಾಗ ಶಿವಲಿಂಗಯ್ಯ ಅವರಿಗೆ ಹೃದಯಾಘಾತ ಉಂಟಾಗಿದ್ದು, ತಕ್ಷಣ ಮಗಳು ಎಚ್ಚೆತ್ತು ಆಸ್ಪತ್ರೆಗೆ ದಾಖಲಿಸಿದ್ರೂ. ಆದ್ರೆ ಚಿಕಿತ್ಸೆ ಮಾಡಿದ್ರೂ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
Comments (0)