ನಗೋಯಾ: 2026ರ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ಕಬಡ್ಡಿ ಫೈನಲ್ (Kabaddi final) ಪಂದ್ಯದಲ್ಲಿ ಇರಾನ್‌ ತಂಡವನ್ನು ಮಣಿಸಿ, ಭಾರತ (India) ಮೂರನೇ ಚಿನ್ನ ಪದಕ (Gold Medal) ತನ್ನದಾಗಿಸಿಕೊಂಡಿದೆ.

ಐಚಿ ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ (Asian Games) 8ನೇ ದಿನವಾದ ಇಂದು ಭಾರತ ಮಹಿಳಾ ಕಬಡ್ಡಿ ತಂಡ ಅದ್ಭುತ ಪ್ರದರ್ಶನ ನೀಡಿದೆ. ಇರಾನ್ ತಂಡವನ್ನು ಮಣಿಸುವ ಮೂಲಕ ಭಾರತೀಯ ಮಹಿಳಾ ಕಬಡ್ಡಿ ತಂಡವು ಭಾರತಕ್ಕೆ ಮೂರನೇ ಚಿನ್ನದ ಪದಕವನ್ನು ತಂದುಕೊಟ್ಟಿದೆ.

ಪಂದ್ಯದ ಅಂತಿಮ ಹಂತದಲ್ಲಿ ಇರಾನ್ ಹಲವು ತಪ್ಪುಗಳನ್ನು ಮಾಡಿದ್ದಲ್ಲದೇ ಒಂದು ಹಂತದಲ್ಲಿ ಇಬ್ಬರು ರೈಡರ್‌ಗಳು ಏಕಕಾಲದಲ್ಲಿ ಡಬಲ್ ಎಂಟ್ರಿ ಮಾಡಿದ್ದಾರೆ. ಆಕರ್ಷಕ ಹೋರಾಟದಿಂದ ಕೂಡಿದ್ದ ಈ ಹಣಾಹಣಿಯಲ್ಲಿ ಭಾರತೀಯ ತಂಡವು 37-34 ಅಂತರದ ರೋಚಕ ಜಯ ಸಾಧಿಸಿದೆ. 

https://x.com/SportsgramIndia/status/2103712914456916162?s=20

ಭಾರತಕ್ಕೆ ಒಟ್ಟು 27 ಪದಕ:

ಈ ಮೂಲಕ ಭಾರತದ ಪದಕಗಳ ಸಂಖ್ಯೆ ಒಟ್ಟು 27ಕ್ಕೆ ಏರಿದೆ. ಇದರಲ್ಲಿ 3 ಚಿನ್ನ, 11 ಬೆಳ್ಳಿ ಮತ್ತು 13 ಕಂಚಿನ ಪದಕಗಳು ಸೇರಿವೆ. ಸದ್ಯ ಭಾರತ ತಂಡವು ಪದಕಗಳ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ. ಪುರುಷರ ಕಬಡ್ಡಿ ಈಗಾಗಲೇ ಫೈನಲ್‌ ತಲುಪಿದ್ದು, ಶೀಘ್ರದಲ್ಲೇ ಚಿನ್ನದ ಪದಕದ ಗೆಲ್ಲುವ ನಿರೀಕ್ಷೆಯಿದೆ.