ವಿಜಯಪುರ ನಗರದ ಹಾಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಅವರು ಬಾಗಲಕೋಟೆಯ ಬಸವೇಶ್ವರ ಸರ್ಕಲ್‌ನಲ್ಲಿ ಬಾಗಲಕೋಟೆ ಸಾಮೂಹಿಕ ಗಣೇಶೋತ್ಸವದ ಅನಾವರಣ ಕಾರ್ಯಕ್ರಮದಲ್ಲಿ ಒಂದು ನಿರ್ದಿಷ್ಟ ಧರ್ಮ ಹಾಗೂ ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು, ಬಾಗಲಕೋಟೆಯ ಮಸೀದಿಗಳನ್ನು ಉಲ್ಲೇಖಿಸಿ “ಪಂಕಾ ಮಸೀದಿ ಆಗಿರಲಿ, ಲಂಕಾ ಮಸೀದಿ ಆಗಿರಲಿ” ಎಂದು ಹೇಳಿರುವುದು ಹಾಗೂ ಕರ್ನಾಟಕ ರಾಜ್ಯದ ಗೃಹ ಸಚಿವಪ್ರಿಯಾಂಕ್ ಖರ್ಗೆ  ಕುರಿತು ಸಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವ ಕುರಿತಂತೆ ಸ್ವಯಂಪ್ರೇರಿತವಾಗಿ ಕ್ರಿಮಿನಲ್ ಪ್ರಕರಣ (FIR) ದಾಖಲಿಸಿ ಕಾನೂನು ಕ್ರಮ ಜರುಗಿಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಆದೇಶ/ನಿರ್ದೇಶನ ನೀಡುವ ಕುರಿತು ಮನವಿ.

ಈ ಕುರಿತು  ಬಾಗಲಕೋಟೆ ಎಸ್.ಪಿ. ಕಚೇರಿಯಲ್ಲಿ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎ.ಪಿ.ಸಿ.ಆರ್. ಅಧ್ಯಕ್ಷರಾದ ನಬೀಸಾಬ್ ಟಂಕಸಾಲಿ, ಮುಸ್ಲಿಂ ಮುಖಂಡರ  ಯುವಕರ ವೇದಿಕೆ ಅಧ್ಯಕ್ಷರಾದ ಅಯ್ಯೂಬಖಾನ ಬಾಗೇವಾಡಿ, ಮುಕ್ತಾರ್ ಮೋಮಿನ್, ಮೆಹಬೂಬ ಸವನೂರ ಹಾಗೂ ಕೆ.ಎಸ್. ಪಿಂಜಾರ್, ವಕೀಲರು ಉಪಸ್ಥಿತರಿದ್ದರು.