ಹುಬ್ಬಳ್ಳಿಯ ಮುಖ್ಯ ರಸ್ತೆಯಲ್ಲಿ ದ್ವಿ ಚಕ್ರ ವಾಹನ ಸವಾರರೆ ಇಲ್ಲಿ ಹೋಗುವ ಮುನ್ನ ಎಚ್ಚರ  ಯಾಕಂದ್ರೆ ಇದು ಭಯಂಕರವಾದ ಪಯಣ ಮತ್ತು ನಿಮ್ಮ ಕೊನೆಯ ಪಯಣವು ಆಗಬಹುದು. ನಾವು ಹೇಳೋಕೆ ಹೊರಟಿರೋ ವಿಷಯ  ಏನಪ್ಪಾ ಅಂದ್ರೆ ನೀವು ಹುಬ್ಬಳ್ಳಿಯ ಟ್ರಾಫಿಕ್ ಪೊಲೀಸ್ ಸ್ಟೇಷನ್ ಹತ್ತಿರದ ಕಾಟೊನ್ ಮಾರ್ಕೆಟ್ ಹತ್ತಿರದ  ಮುಖ್ಯ ರಸ್ತೆಯಲ್ಲಿ  ದ್ವಿ ಚಕ್ರ ವಾಹನ ಚಲಾಯಿಸುವಾಗ ಸ್ವಲ್ಪ ಯಾಮಾರಿದರೂ ನಿಮ್ಮ ಜೀವಕ್ಕೆ ಬೆಲೆ ತೆರಬೇಕಾದ ಪರಸ್ಥಿತಿ ಬರಬೇಕಾಗತ್ತೆ. ಕಾರಣ ಅಲ್ಲಿನ ಧೂಳು ಬರಿತ ರಸ್ತೆ. ದೊಡ್ಡ ವಾಹನ ಜೋರಾಗಿ ಚಲಿಸಿದಾಗ ಒಂದು ವೇಳೆ ನೀವು ಅದರ ಹಿಂಬಾಗದ್ಲಲಿ ಪ್ರಯಾಣಿಸುತಿದ್ದರೆ. ಆ ದೂಳಿನ ರಭಸಕ್ಕೆ ರಸ್ತೆಯೇ ಕಾಣದೆ ಅಪಘಾತದಿಂದ ಪಾರಾದರು ಅಸ್ತಮಾದಿಂದ ಪಾರಾಗಲು ಸಾಧ್ಯವೇ ಇಲ್ಲ. 
ಇದನೆಲ್ಲ ಗಮನಿಸಿದ ಮೇಲೆ ಸಂಬಂಧ ಪಟ್ಟ ಅಧಿಕಾರಿಗಳು ಕೂಡ  ತಲೆ ಕೆಡಸಿಕೊಳ್ಳುತ್ತಿಲ್ಲ. ಇದು ನಮ್ಮ ಹುಬ್ಬಳ್ಳಿಯ ಪ್ರತಿಷ್ಠಿತ ರಸ್ತೆಯ. ಧೂಳ್ ಧಮಾಕ. ಎಚ್ಚೆತ್ತಿಕೊಳ್ಳಿ