ಬೆಂಗಳೂರು: ಹೊಸ ನಗರಗಳು, ಮಾಲ್ಗಳು ಅಥವಾ ಜನನಿಬಿಡ ಮಾರುಕಟ್ಟೆಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡಿದಾಗ, ಹಲವು ಬಾರಿ ನಾವು ಕಾರನ್ನು ಎಲ್ಲಿ ನಿಲ್ಲಿಸಿದ್ದೇವೆ ಎಂಬುದನ್ನೇ ಮರೆತುಬಿಡುತ್ತೇವೆ. ಇದರಿಂದಾಗಿ ಸ್ವಂತ ವಾಹನ ಹುಡುಕಲು ಗಂಟೆಗಟ್ಟಲೆ ಸಮಯ ವ್ಯರ್ಥವಾಗುತ್ತದೆ. ಆದರೆ, ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ಗೂಗಲ್ ಮ್ಯಾಪ್ಸ್ನ ಸೇವ್ಡ್ ಪಾರ್ಕಿಂಗ್ ಫೀಚರ್ ಮೂಲಕ ಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.
ಪಾರ್ಕಿಂಗ್ ಲೋಕೇಶನ್ ಸೇವ್ ಮಾಡುವುದು ಹೇಗೆ?
- ಆಂಡ್ರಾಯ್ಡ್ ಮತ್ತು ಐಫೋನ್ಗಳಲ್ಲಿ ಮೊದಲು ನಿಮ್ಮ ಫೋನ್ನಲ್ಲಿ GPS ಆನ್ ಮಾಡಿ, ಗೂಗಲ್ ಮ್ಯಾಪ್ಸ್ ಆ್ಯಪ್ ತೆರೆಯಿರಿ.
- ನಿಮ್ಮ ಪ್ರಸ್ತುತ ಸ್ಥಳವನ್ನು ತೋರಿಸುವ ಬ್ಲೂ ಡಾಟ್ ಮೇಲೆ ಟ್ಯಾಪ್ ಮಾಡಿ.
- ಕೆಳಗೆ ಬರುವ ಆಯ್ಕೆಗಳಲ್ಲಿ ಸೇವ್ ಪಾರ್ಕಿಂಗ್ ಎಂಬುದನ್ನು ಆಯ್ಕೆ ಮಾಡಿ.
- ಹೀಗೆ ಮಾಡಿದಾಗ ಮ್ಯಾಪ್ನಲ್ಲಿ ‘ಪಿ’ ಸಿಂಬಲ್ ಕಾಣಿಸಿಕೊಳ್ಳುತ್ತದೆ. ಇಲ್ಲಿ ನೀವು ಪಿಲ್ಲರ್ ಸಂಖ್ಯೆ, ಫ್ಲೋರ್ ವಿವರಗಳು, ಸಮಯದ ಮಿತಿ ಅಥವಾ ಕಾರಿನ ಫೋಟೋವನ್ನು ಸಹ ನೋಟ್ ರೂಪದಲ್ಲಿ ಸೇರಿಸಬಹುದು.
ವಾಹನದ ಬಳಿಗೆ ಹಿಂತಿರುಗುವುದು ಹೇಗೆ?
ಕಾರಿನ ಬಳಿಗೆ ಹಿಂತಿರುಗುವಾಗ ಗೂಗಲ್ ಮ್ಯಾಪ್ಸ್ ತೆರೆದು, ಕೆಳಗೆ ಕಾಣಿಸುವ ‘ಸೇವ್ಡ್ ಪಾರ್ಕಿಂಗ್’ ಮೇಲೆ ಕ್ಲಿಕ್ ಮಾಡಿ ‘ಡೈರೆಕ್ಷನ್ಸ್’ ಅಥವಾ ‘ಸ್ಟಾರ್ಟ್’ ನೀಡಿದರೆ, ಮ್ಯಾಪ್ ನಿಮ್ಮನ್ನು ನೇರವಾಗಿ ಕಾರಿನ ಬಳಿಗೆ ಕರೆದೊಯ್ಯುತ್ತದೆ. ವಾಹನ ತಲುಪಿದ ನಂತರ ‘ಕ್ಲಿಯರ್’ ಕೊಟ್ಟು ಆ ಪಾಯಿಂಟ್ ತೆಗೆದುಹಾಕಬಹುದು.
ಈ ಫೀಚರ್ನಿಂದ ಪಾರ್ಕಿಂಗ್ ಫ್ಲೋರ್, ಪಿಲ್ಲರ್ ಸಂಖ್ಯೆ ಇತ್ಯಾದಿ ವಿವರಗಳನ್ನು ಬರೆದಿಡಬಹುದು. ಪಾರ್ಕಿಂಗ್ ಸಮಯದ ಮಿತಿಯನ್ನು ಹೊಂದಿಸಬಹುದು. ನಿಮ್ಮ ವಾಹನ ನಿಂತಿರುವ ಜಾಗದ ಫೋಟೋ ತೆಗೆದು ಅಪ್ಲೋಡ್ ಮಾಡಬಹುದು. ಈ ಪಾರ್ಕಿಂಗ್ ಸ್ಥಳವನ್ನು ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಶೇರ್ ಕೂಡ ಮಾಡಬಹುದು.
Comments (0)