ಚಿಕ್ಕಮಗಳೂರು: ಬಹಳ ಜನ ನನಗೆ ರಾಜೀನಾಮೆ ಕೊಡಬೇಡಿ ಸರ್ ಅಂದ್ರು. ಇಲ್ಲ, ಮಾತು ಕೊಟ್ಟಿದ್ದೇನೆ ಅಂತ ಕೊಟ್ಟೆ ಎಂದು ರಾಜೀನಾಮೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಮಾತನಾಡಿದರು.
ಕಡೂರಿನಲ್ಲಿ ಸಿದ್ದರಾಮಯ್ಯ ಮಾತನಾಡಿ, ನಾನು ಯಾವುದೋ ದೇವಸ್ಥಾನಕ್ಕೆ ಹೋದಾಗ ಮೋದಿ…ಮೋದಿ… ಅಂತಿದ್ರು. ಮೋದಿ ಸ್ವಾತಂತ್ರ್ಯಕ್ಕೆ ಹೋರಾಡಿದ್ರಾ, ಸಂಗೊಳ್ಳಿ ರಾಯಣ್ಣ ರೀತಿ ಹೋರಾಡಿದ್ರಾ? ಜನ ಸುಮ್ನೆ ಮೋದಿ… ಮೋದಿ… ಅಂತಾರೆ. 2 ಕೋಟಿ ಕೆಲಸ ಎಲ್ಲಿ, ಅಚ್ಚೇ ದಿನ್ ಎಲ್ಲಿ, ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರು ಮಾಡಿದ್ರಾ? 12 ವರ್ಷ ಆಯ್ತು ಪ್ರಧಾನಿ ಆಗಿ, ಕಪ್ಪು ಹಣ ತಂದು 15 ಲಕ್ಷ ಹಾಕ್ತೀನಿ ಅಂದ್ರು ಹಾಕಿದ್ರಾ? ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿಗೆ ಏಕೆ ಮತ ಹಾಕಬೇಕು? ಪಾಪ… ಜನರಗೆ ತಪ್ಪು ಮಾಹಿತಿ ನೀಡಿ ತಪ್ಪು ದಾರಿಗೆ ಎಳೆದಿದ್ದಾರೆ ಎಂದು ಟಾಂಗ್ ಕೊಟ್ಟರು.
Comments (0)