ಮಂಡ್ಯ: ಗಣೇಶ ಪ್ರತಿಷ್ಠಾಪನೆ ವೇಳೆ ಅವಘಡ ಸಂಭವಿಸಿದ್ದು, ಮಂಡ್ಯ (Mandya) ಶಾಸಕ ಗಣಿಗ ರವಿಕುಮಾರ್ (Ganiga Ravikumar) ತಲೆಗೆ ಪೆಟ್ಟು ಬಿದ್ದಿದೆ. ಮಂಡ್ಯ ನಗರದ ಮರಿಗೌಡ ಬಡಾವಣೆಯ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಶಾಸಕ ಗಣಿಗ ರವಿಕುಮಾರ್ ಆಗಮಿಸಿದ್ದರು. ಈ ವೇಳೆ ಗಣೇಶ ಮೂರ್ತಿ ಮುಂಭಾಗದ ಸ್ಕ್ರೀನ್ ಸರಿಸುವಾಗ ಶಾಸಕರ ತಲೆ ಮೇಲೆ ಕಬ್ಬಿಣದ ರಾಡ್ (Iron Rod) ಬಿದ್ದಿದ್ದು, ಇದರಿಂದ ಶಾಸಕ ಗಣಿಗ ರವಿಕುಮಾರ್ ತಲೆಗೆ ಗಾಯವಾಗಿದೆ. ತಕ್ಷಣವೇ ಶಾಸಕರು ಖಾಸಗಿ ಆಸ್ಪತ್ರೆಗೆ ಧಾವಿಸಿದ್ದಾರೆ. ವೈದ್ಯರು (Doctors) ತಲೆಗೆ ಬ್ಯಾಂಡೇಜ್ ಹಾಕಿದ್ದಾರೆ. ಮುನ್ನೆಚ್ಚರಿಕೆ ಹಿನ್ನೆಲೆ ಸಿಟಿ ಸ್ಕ್ಯಾನ್ (CT Scan) ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
Comments (0)