ಸ್ಯಾಂಡಲ್ವುಡ್ (Sandalwood) ನಟ ದುನಿಯಾ ವಿಜಯ್ (Duniya Vijay) ಅವರ ದಾಂಪತ್ಯ ಜೀವನಕ್ಕೆ (Marital Life) ಸಂಬಂಧಿಸಿ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಕನ್ನಡದ ಖ್ಯಾತ ನಟ, ಪರಭಾಷಾ ಸಿನಿಮಾಗಳಲ್ಲಿ (Cinema) ಮಿಂಚುತ್ತಿರುವ, ನಿರ್ದೇಶಕನಾಗಿಯೂ ಬೆಳೆಯುತ್ತಿರುವ ದುನಿಯಾ ವಿಜಯ್ ಹಾಗೂ ಅವರ ಮೊದಲ ಪತ್ನಿಯ ದಾಂಪತ್ಯ ಜೀವನ ಕಾನೂನಾತ್ಮಕವಾಗಿ ಅಧಿಕೃತವಾಗಿ ಕೊನೆಗೊಂಡಿದೆ.
ದುನಿಯಾ ವಿಜಯ್ ನಾಗರತ್ನ ದಾಂಪತ್ಯ ಅಂತ್ಯವಾಗಿದ್ದು, ವಿಚ್ಚೇದನೆ ಮಂಜೂರು ಮಾಡಿ ಹೈಕೋರ್ಟ್ ಆದೇಶ ನೀಡಿದೆ. ನ್ಯಾ. ಡಿಕೆ ಸಿಂಗ್, ನ್ಯಾ. ಎಚ್ ಶಾಂತಿಭೂಷಣ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಕೊಟ್ಟಿದೆ.
ಪತ್ನಿಗೆ 2 ಕೋಟಿ ಜೀವನಾಂಶ
ದುನಿಯಾ ವಿಜಯ್ ಅವರ ಸ್ಥಾನಮಾನ, ಹಣಕಾಸಿನ ಸ್ಥಿತಿ ನೋಡಿ ಪತ್ನಿಗೆ 2 ಕೋಟಿ ರೂಪಾಯಿ ಜೀವನಾಂಶ ನೀಡುವಂತೆ ಆದೇಶ ಮಾಡಲಾಗಿದೆ ಎಂದು ಖಾಸಗಿ ಸುದ್ದಿವಾಹಿನಿ ವರದಿ ಮಾಡಿದೆ.
ಇವರು 1999ರಲ್ಲಿ ಮದುವೆಯಾಗಿದ್ದರು. ಇವರ ಮದುವೆಯಾಗಿ ಭರ್ತಿ 27 ವರ್ಷಗಳಾಗಿವೆ. 2013ರಲ್ಲಿ ದುನಿಯಾ ವಿಜಯ್ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ 2014ರಲ್ಲಿ ಇಬ್ಬರೂ ಮತ್ತೆ ಒಂದಾದರು. ಆ ನಂತರ ದುನಿಯಾ ವಿಜಯ್ ಅವರು 2018ರಲ್ಲಿ ಮತ್ತೆ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದರು. ಇದು ಮುಂದುವರಿದು ಈಗ ಭರ್ತಿ 9 ವರ್ಷಗಳ ನಂತರ ಇತ್ಯರ್ಥವಾಗಿದ್ದು ಡಿವೋರ್ಸ್ ಫೈನಲ್ ಆಗಿದೆ.
ಒನ್ ಟೈಂ ಸೆಟ್ಲ್ ಮೆಂಟ್
ನ್ಯಾಯಮೂರ್ತಿಗಳಾದ ಡಿಕೆ ಸಿಂಗ್ ಹಾಗು ಶಾಂತಿಭೂಷಣ್ ರ ವಿಭಾಗೀಯ ಪೀಠದಿಂದ ಆದೇಶ ಹೊರಬಂದಿದೆ. ಮೂರು ತಿಂಗಳ ಒಳಗೆ ಒನ್ ಟೈಂ ಸೆಟ್ಲ್ ಮೆಂಟ್ ಆಗಿ ನಾಗರತ್ನಗೆ ಜೀವನಾಂಶ ನೀಡುವಂತೆ ಆದೇಶ ನೀಡಲಾಗಿದೆ.
ಅಲ್ಲದೆ ಮೂವರು ಮಕ್ಕಳ ಸಂಪೂರ್ಣ ಜವಬ್ದಾರಿ ದುನಿಯಾ ವಿಜಯ್ ಹೊರುವಂತೆ ಆದೇಶದಲ್ಲಿ ತಿಳಿಸಲಾಗಿದೆ. ನಾಗರತ್ನ ಅವರಿಗೆ ಸ್ವಂತ ಮನೆ ಇದ್ದು ಒಂದು ಮನೆ ಬಾಡಿಗೆ ಬಡುತ್ತಿದೆ ಅಂತಾ ವಿಜಯ್ ಪರ ವಕೀಲರು ವಾದಿಸಿದ್ದರು.
ನಾಗರತ್ನರ ಕ್ರೌರ್ಯದಿಂದ ವಿಜಯ್ ನೊಂದಿದ್ದಾರೆ ಅಂತಾ ವಕೀಲ ವಾದಿಸಿದ್ದರು. ಫಾಮಿಲಿ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಅಪೀಲ್ ಹೋಗಿದ್ದ ವಿಜಯ್ ಅವರಿಗೆ ಈಗ ಡಿವೋರ್ಸ್ ಸಿಕ್ಕಿದೆ. ಇದೀಗ ಹೈಕೋರ್ಟ್ ನಲ್ಲಿ ಡೈವೋರ್ಸ್ ಪಡೆದುಕೊಂಡ ನಟ ದುನಿಯಾ ವಿಜಯ್ ಮೊದಲ ಪತ್ನಿಯಿಂದ ಕಾನೂನಾತ್ಮಕವಾಗಿ ಬೇರ್ಪಟ್ಟಿದ್ದಾರೆ.
Comments (0)