ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್ ನಂ 67 ರಲ್ಲಿ ಪಾಲಿಕೆ ಸದಸ್ಯರಾದ ಶಿವು

ಮೆಣಸಿನಕಾಯಿ ಯವರ ನೇತೃತ್ವದಲ್ಲಿ “ಸ್ವಚ್ಛ ಸಂಡೆ” ಅಭಿಯಾನ ಇಂದು ಸತತವಾಗಿ 26 ನೇಯ ವಾರ ಬಡಿಗೇರ ಓಣಿ,ಬಳ್ಳೊಳ್ಳಿ ಮಠ ಓಣಿ, ಮಠಪತಿ ಗಲ್ಲಿ, ಕೋರಿ ಓಣಿ,ಬಅಳಗು೦ಡಗಿ ಓಣಿ, ಶೀಲವಂತರ ಓಣಿ,ಸಿಂಪಿ ಗಲ್ಲಿ ಹಾಗೂ ಪಿಂಜಾರ ಓಣಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮೂಹಿಕ ಸ್ವಚ್ಛತಾ ಅಭಿಯಾನವನ್ನು ಕೈಗೊಂಡು ಫಾಗಿಂಗ್ ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳಾದ ನೂರಂದಪ್ಪ ಭಜಂತ್ರಿ, ಮಂಜು ಕೆಂಪಣ್ಣನವರ, ಲಕ್ಷ್ಮಿ ಗುಡಿಹಾಳ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.