ಹೆಣ್ಣಿನ ಗೌರವ ಕಾಯುವುದು ನಮ್ಮ ಸಂಕಲ್ಪ, ಗೃಹಲಕ್ಷ್ಮಿಯರ ಬಾಳಿಗೆ ಗ್ಯಾರಂಟಿ ದೀಪ ನಾಡಿನ ಕೋಟ್ಯಂತರ ಮಹಿಳೆಯರ ಬದುಕಿನಲ್ಲಿ ಬದಲಾವಣೆ ತರುವುದೇ ನಮ್ಮ ಸರ್ಕಾರದ ಬಹುದೊಡ್ಡ ಧ್ಯೇಯ. `ಗೃಹಲಕ್ಷ್ಮಿ' ಯೋಜನೆಯಡಿ ಇಲ್ಲಿಯವರೆಗೆ 1.24 ಕೋಟಿ ಫಲಾನುಭವಿಗಳಿಗೆ ಯಶಸ್ವಿಯಾಗಿ ಹಣ ಪಾವತಿಸಲಾಗಿದ್ದು, ಇದೀಗ 2026-27ನೇ ಸಾಲಿನ ಕಂತಿಗಾಗಿ ₹2,500 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಅರ್ಹ ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಡಿಬಿಟಿ ಮೂಲಕ ಈ ಮೊತ್ತ ತಲುಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಹಿಳೆಯರ ಸ್ವಾವಲಂಬಿ ಬದುಕಿಗೆ ನೀಡಿದ ಮಾತನ್ನು ಉಳಿಸಿಕೊಳ್ಳಲು ನಾವು ಸದಾ ಬದ್ಧ. ರಾಜ್ಯದ ಜನತೆಗೆ ಆಸರೆಯಾಗಿರುವ ಗ್ಯಾರಂಟಿ ಯೋಜನೆಗಳು ನಿರಂತರವಾಗಿ ಮುಂದುವರಿಯಲಿವೆ.